1776-1856. ಇಟಲಿ ದೇಶದ ಭೌತವಿಜ್ಞಾನಿ ಮತ್ತು ರಸಾಯನ ವಿಜ್ಞಾನಿ. ತುರಿನ್ ನಗರದಲ್ಲಿ ಜನಿಸಿದ. ಅದೇ ಊರಿನ ವಿಶ್ವವಿದ್ಯಾನಿಲಯ ದಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾದ (1834-50). 1811ರಲ್ಲಿ ಒಂದು ಹೊಸ ಊಹೆಯನ್ನು ಮುಂದಿಟ್ಟ: ಪರಮಾಣುಗಳಿಂದ ಅಣುಗಳು ರಚಿತವಾಗುತ್ತವೆಯೆಂದೂ ಈ ಅಣುಗಳು ಪದಾರ್ಥದ ಭೌತಗುಣಗಳಿಗೆ ಮೂಲವೆಂದೂ ಈತ ತಿಳಿಸಿದುದು ರಾಸಾಯನಿಕ ಮತ್ತು ಭೌತವಿಜ್ಞಾನಗಳ ಮುಂದಿನ ಬೆಳೆವಣಿಗೆಗೆ ಬಹಳ ಸಹಕಾರಿಯಾಯಿತು. ಈತನಿಗೆ ಕಾಂಟೆ ಡಿ ಕ್ವಾರೆಜ್ಞ ಎಂದರೆ ಕ್ವಾರೆಜ್ಞದ ಪ್ರಭು ಎಂಬ ಬಿರುದಿತ್ತು. ಈತ 1856 ಜುಲೈ 9 ರಂದು ನಿಧನನಾದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ